ನಾಲ್ಕೂವರೆ ತಿಂಗಳ ಬಳಿಕ ದರ್ಶನ್‌ ಗೆ ತಾತ್ಕಾಲಿಕವಾಗಿ ಜೈಲಿನಿಂದ ಬಿಡುಗಡೆ ಭಾಗ್ಯ

ನಾಲ್ಕೂವರೆ ತಿಂಗಳ ಬಳಿಕ ದರ್ಶನ್‌ ಗೆ ತಾತ್ಕಾಲಿಕವಾಗಿ ಜೈಲಿನಿಂದ ಬಿಡುಗಡೆ ಭಾಗ್ಯ

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ಗೆ ಹೈಕೋರ್ಟ್ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆರೋಗ್ಯ ತಪಾಸಣೆಗಾಗಿ ಜಾಮೀನು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಈ ಆದೇಶ ನೀಡಿದ್ದಾರೆ. ಇದರೊಂದಿಗೆ ಸರಿಸುಮಾರು ನಾಲ್ಕೂವರೆ ತಿಂಗಳ ಬಳಿಕ ದರ್ಶನ್‌ ತಾತ್ಕಾಲಿಕವಾಗಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ದರ್ಶನ್‌ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅಂದರ್‌ ಆಗಿದ್ದರು, ಜೈಲು ಸೇರಿದಾಗಿನಿಂದಲೂ, ಅರ್ಜಿ ಸಲ್ಲಿಸಿದ್ದ ದಾಸನಿಗೆ ಇಷ್ಟು ದಿನ ಬೇಲ್‌ ವಿಚಾರದಲ್ಲಿ ನಿರಾಸೆ ಉಂಟಾಗಿತ್ತು. ಕೋರ್ಟ್‌ ದರ್ಶನ್‌ ಅವರಿಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ. ಇದೀಗ ಜೈಲಿನಲ್ಲಿದ್ದ ದಾಸ ಇದೀಗ ಹೊರಬರುತ್ತಿದ್ದು, ವಿಷಯ ಕೇಳಿ ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ.